Duration 7:3

ಪ್ರಜಾಪ್ರತಿನಿಧಿಯ ಕಾರ್ಯವೈಖರಿಯ ವಿಧಾನ | SOP | STANDARD OPERATING PROCEDURE | UPP | UPENDRA

126 114 watched
0
8.1 K
Published 24 Nov 2019

ಪ್ರಜಾಪ್ರತಿನಿಧಿಯ ಕಾರ್ಯವೈಖರಿಯ ವಿಧಾನ - SOP ಉತ್ತಮ ಪ್ರಜಾಕೀಯ ಪಕ್ಷವು ಮತದಾರರ ಪಕ್ಷವಾಗಿರುವುದರಿಂದ, ಇಲ್ಲಿ: 1.     ನಗದುರಹಿತ ಪಕ್ಷ. (ಪಾರ್ಟಿ ಫಂಡ್ ಇಲ್ಲ) ಯಾವುದೇ ರೀತಿಯಲ್ಲಿ ಪಕ್ಷವು ಹಣ ಸಂಗ್ರಹಿಸುವುದಿಲ್ಲ. (ಪಕ್ಷದ ಕಾರ್ಯಚಟುವಟಿಕೆಗಳ ಅನಿವಾರ್ಯ ವೆಚ್ಚಗಳನ್ನು ಮಾತ್ರ ಪಕ್ಷದ ಅಧ್ಯಕ್ಷರು ಭರಿಸುತ್ತಾರೆ.) {Note: Please keep this line in next line-single line} 2.     ಕಾರ್ಯಕರ್ತರು ಇಲ್ಲ 3.     ಪ್ರಾದೇಶಿಕ ಕಛೇರಿಗಳಿಲ್ಲ 4.      ಮೆರವಣಿಗೆ / ರ್ಯಾಲಿ / ಬ್ಯಾನರ್‌ಗಳು / ಜನರನ್ನು ಒಟ್ಟುಗೂಡಿಸುವಿಕೆ ಇಲ್ಲ 5.     ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮನ್ನು ಕನಿಷ್ಟ  ವೆಚ್ಚಗಳಿಗೆ ಮಾತ್ರ ಸೀಮಿತಗೊಳಿಸುವಂತೆ ಸೂಚಿಸಲಾಗಿದೆ 6.     ಯಾರನ್ನೂ ದೂಷಿಸುವುದಿಲ್ಲ (ದೂಷಿಸುವ ಬದಲು ನಾವು ಪರಿಹಾರಗಳನ್ನು ಕಂಡುಕೊಳ್ಳುತ್ತೇವೆ) 7.     ಸುಳ್ಳು ಭರವಸೆಗಳಿಲ್ಲ 8.      ರಾಜಕೀಯ ಲಾಭಕ್ಕಾಗಿ ಮಾಡುವ ಪ್ರತಿಭಟನೆಗಳು ಇರುವುದಿಲ್ಲ 9.     ರಾಜಕೀಯ ಲಾಭಕ್ಕಾಗಿ ಮಾಡುವ  ಸಮಾಜಸೇವೆ ಇರುವುದಿಲ್ಲ ಶುದ್ಧ ರೂಪದ ಪ್ರಜಾಪ್ರಭುತ್ವದಲ್ಲಿ ನಮಗೆ ಬೇಕಿರುವುದು, 1. ಪ್ರಾಮಾಣಿಕ ಕೆಲಸಗಾರರು (ಅಭ್ಯರ್ಥಿಗಳು)… ಅವರು ಸಂಬಳಕ್ಕಾಗಿ ಕೆಲಸ ಮಾಡುತ್ತಾರೆ. 2.ಪ್ರಾಮಾಣಿಕ ಮತದಾರರು (ಪ್ರಜೆಗಳು) ...  ನಿಜವಾದ ಸಿದ್ಧಾಂತಕ್ಕೆ ಮಾತ್ರ ಮತ ಹಾಕಬೇಕು. ಉತ್ತಮ ಪ್ರಜಾಕೀಯ ಪಕ್ಷವು ಮತದಾರರ ಪಕ್ಷವಾಗಿರುವುದರಿಂದ ಇಲ್ಲಿ ಮತದಾರರೇ ನಾಯಕರು. ಉತ್ತಮ ಪ್ರಜಾಕೀಯ ಪಕ್ಷದಲ್ಲಿ ನಾಯಕತ್ವದ ಸಂಸ್ಕೃತಿ ಇರುವುದಿಲ್ಲ. ನಮಗೆ ಬೇಕಿರುವುದು ಪ್ರಜೆಗಳಾದ ನಾವು ಹೇಳಿದಂತೆ ಕೆಲಸ ಮಾಡುವಂತಹ ಉತ್ತಮ ಕಾರ್ಮಿಕರು. ಇಲ್ಲಿ ನಮಗೆ ಬೇಕಿರುವುದು ಕಾಯಕತ್ವದ ಸಂಸ್ಕೃತಿ. ನನ್ನ ಪ್ರಣಾಳಿಕೆಗಳನ್ನು ಈಡೇರಿಸಿಕೊಳ್ಳಲು ನಾನು ಚುನಾಯಿಸಿದಂತಹ ಜನಪ್ರತಿನಿಧಿಗಳು / ಪ್ರಜಾ ಕಾರ್ಮಿಕರಾದಂತಹ ನಿಮ್ಮಿಂದ (ಜನ ಪ್ರತಿನಿಧಿಗಳಿಂದ) ಕಲಾತ್ಮಕ ಆಡಳಿತ / ಆರ್ಟ್ ಆಫ್ ಗವರ್ನೆನ್ಸ್ ನಂತೆ ಕೆಲಸವನ್ನು ಪ್ರಜೆಯಾದ ನಾನು ಬಯಸುತ್ತೇನೆ. A - ಹೊಣೆಗಾರಿಕೆ R - ಜವಾಬ್ದಾರಿ T - ಪಾರದರ್ಶಕತೆ ಇದಕ್ಕಾಗಿ ಪ್ರಜಾಪ್ರತಿನಿಧಿಯು ಈ ನಿರ್ಧಿಷ್ಟ ಕಾರ್ಯವೈಖರಿಯ ವಿಧಾನ ವನ್ನು (SOP) ಅನುಸರಿಸಬೇಕು ನಾನು ಈ ದೇಶದ ಪ್ರಜೆ, ಈ ದೇಶ ಪ್ರಜಾಪ್ರಭುತ್ವ ದೇಶ.. ಅಂದ್ರೆ ಪ್ರಜೆಯಾದ ನಾನು ಪ್ರಭು.. ರಾಜ.. ನಾನು ಒಂದು ಕಾಫಿ ಟೀ ಕುಡಿಯುವುದರಿಂದ ಹಿಡಿದು ಪೆಟ್ರೊಲ್ ಹಾಕಿಸಿಕೊಳ್ಳುವ ವರೆಗೂ ಎಲ್ಲದಕ್ಕೂ ಪರೋಕ್ಷವಾಗಿ ತೆರಿಗೆ ಕಟ್ಟುತ್ತೀನಿ. ನಾನೂ ಮಾಡುವ ಎಲ್ಲ ವ್ಯವಹಾರಗಳಿಗೂ ಪ್ರತ್ಯಕ್ಷವಾಗಿ ತೆರಿಗೆ ಕಟ್ಟುತ್ತೇನೆ. ಈ ಥರಾ ನಾವೆಲ್ಲರೂ ಸೇರಿ ನನ್ನ ರಾಜ್ಯಕ್ಕೆ ಪ್ರತಿ ವರ್ಷಕ್ಕೆ ಕಟ್ಟುವ ತೆರಿಗೆ ಹಣ ಎರಡು ಲಕ್ಷ ಕೋಟಿಗಿಂತಲೂ ಜಾಸ್ತಿ. ಅದರ ಜೊತೆ ನನ್ನ ದೇಶದ ಭೂಮಿ ನದಿ-ಕೆರೆ ಬೆಟ್ಟ-ಗುಡ್ಡ ವನ್ಯ ಸಂಪತ್ತು ಖನಿಜ ಸಂಪತ್ತು ನೈಸರ್ಗಿಕ ಸಂಪತ್ತು ಎಲ್ಲವೂ ನನ್ನದು. ಇವೆಲ್ಲದರ ಮೇಲಿನ ನನ್ನ ಅಧಿಕಾರವನ್ನು ಯಾವುದೋ ಪಕ್ಷಕ್ಕೆ, ಅದರಲ್ಲಿರುವ ಕೆಲವು ನಾಯಕರಿಗೆ ಕೊಟ್ಟು, ಅವರಿಗೆ ಸಂಬಳ ಸೌಲಭ್ಯ ಭತ್ಯೆ ಎಲ್ಲಾ ಕೊಟ್ಟು ಅವರ ಲಾಭಕ್ಕೆ ಅವರು ಹೇಳಿದಂತೆ ಕೇಳಿ ಅವರಿಂದ ಐದು ವರ್ಷ ಆಳಿಸಿಕೊಳ್ಳುವ ಈ ಭ್ರಷ್ಟ ನಾಯಕ ಸಂಸ್ಕೃತಿಯ, ವ್ಯಾಪಾರಿ ರಾಜಕೀಯಾನಾ ಬದಲು ಮಾಡಿ ಪ್ರತಿದಿನ ನನ್ನ ಈ ಎಲ್ಲಾ ಸಂಪತ್ತು ಮತ್ತು ನನ್ನ ಮಕ್ಕಳ ಭವಿಷ್ಯದ ಮೇಲಿನ ಅಧಿಕಾರವನ್ನು ನಾನೇ ಇಟ್ಟುಕೊಂಡು ನನ್ನ ಅಭಿಲಾಷೆಗಳನ್ನು ನನ್ನ ಬೇಡಿಕೆ ಮತ್ತು ನನ್ನ ಕನಸು ಕಲ್ಪನೆಗಳನ್ನು ಸಾಕಾರಗೊಳಿಸುವುದಕ್ಕೆ ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದು ನಾನು ಬಯಸುವಂತ ಕೆಲಸಗಳನ್ನು ಸಂಪೂರ್ಣ ಪಾರದರ್ಶಕತೆಯಿಂದ ಮಾಡಿ ನನಗೆ ಈ ಎಲ್ಲ ಕೆಲಸಗಳ ವರದಿಗಳನ್ನು ಕೊಡುವ ಕೆಲಸಗಾರರನ್ನು ನೇಮಿಸಿಕೊಳ್ಳುವ ಮತ್ತು ನನಗೆ ಅವರ ಕೆಲಸ ಇಷ್ಟವಾಗದಿದ್ದರೆ "ರೈಟ್ ಟು ರೀಕಾಲ್" ನಂತೆ ಕೆಲಸಗಾರನನ್ನು ಕೆಳಗಿಳಿಸುವ ನಿಜವಾದ ಪ್ರಜಾಪ್ರಭುತ್ವದ ಕಾಯಕ ಸಂಸ್ಕೃತಿಯ ಪ್ರಜಾಕೀಯ ಸುವ್ಯವಸ್ಥೆಯನ್ನು ತಂತ್ರಜ್ಞಾನ ಹಾಗೂ ಪ್ರಜಾಪ್ರತಿನಿಧಿಗಳ ನಿರ್ಧಿಷ್ಟ ಕಾರ್ಯವೈಖರಿಯ ,(ಎಸ್.ಓ.ಪಿ.) ಮುಖಾಂತರ ತರಬಹುದು.. ಇದು ಹೇಗೆ ಸಾಧ್ಯ? ಎಂಬ ಈ ಆ್ಯಪ್ ನಲ್ಲಿರುವವಿಚಾರಗಳನ್ನು ನಾನು ಒದುತ್ತೀನಿ ಅಥವಾ ಕೇಳಿ ತಿಳಿದುಕೊಳ್ತೀನಿ.. ಹೆಚ್ಚಿನ ಯಾವುದೇ ಮಾಹಿತಿಗಳಿಗಾಗಿ ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ವೆಬ್ಸೈಟ್ www.prajaakeeya.org ಗೆ ಭೇಟಿ‌‌ ನೀಡಿರಿ.

Category

Show more

Comments - 684